Durga Saptashati

Durga Saptashati (Kannada)

₹699
Only left in stock. Hurry up!
badge
badge
badge

Product details

ಶ್ರೀ ದುರ್ಗಾ ಸಪ್ತಶತಿಯನ್ನು ಕಲಿಯಲು ಮತ್ತು ಪಠಿಸಲು ಬಯಸುವ ಭಕ್ತರಿಗಾಗಿ ಈ ಪುಸ್ತಕವನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆಯಲಾಗಿದೆ. ಪುಸ್ತಕವು ಸಾಂಪ್ರದಾಯಿಕ ಏಕಾದಶ ನ್ಯಾಸ, ಸ್ವಾಹಾ ಚಿನ್ನೆಗಳನ್ನೊಳಗೊಂಡ 700 ಶ್ಲೋಕಗಳು (ಬೀಜಾತ್ಮಕ ಸಪ್ತಶತಿ ಸೇರಿದಂತೆ) ಮತ್ತು ಚಂಡಿ ಹೋಮಕ್ಕಾಗಿ ಅಧ್ಯಾಯ ಘೋಷಗಳನ್ನು ಒಳಗೊಂಡಿದೆ. ಈ ಪುಸ್ತಕವು ಶ್ರೀ ಭಾಸ್ಕರರಾಯ ಮಖಿನ್‍ರವರ ಮಹಾನ್ ಕೃತಿ 'ಗುಪ್ತವತಿ' ಯನ್ನು ಆಧರಿಸಿದೆ ಮತ್ತು ಎಲ್ಲಾ ಭಕ್ತರಿಗೆ ಪಾರಾಯಣ, ಪೂಜೆ (ಆರಧನೆ) ಮತ್ತು ಸಂಬಂಧಿತ ಹೋಮ, ತರ್ಪಣ, ಮಾರ್ಜನೆ, ಪ್ರೋಕ್ಷಣೆಗಳಲ್ಲಿ ಮಾರ್ಗದರ್ಶನ ನೀಡುತ್ತದೆ. ಜನಪ್ರಿಯ ತ್ರಯಂಗ ವಿಧಾನ ಮಾತ್ರವಲ್ಲದೆ ನವಾಂಗ ವಿಧಾನವೂ ಈ ಪುಸ್ತಕದಲ್ಲಿ ಅಡಕವಾಗಿದೆ. ಇದರಲ್ಲಿರುವ ಚಿತ್ರಗಳು ಮತ್ತು ವಿವರಣೆಗಳಿಂದ ಆರಂಬಿಕರಿಗೆ ವಿಭಿನ್ನ ಪಠ್ಯಗಳನ್ನು ಮತ್ತು ಮುದ್ರೆಗಳನ್ನು ಕಲಿಯಲು ಸುಲಭವಾಗುತ್ತದೆ. ಉದಾಹರಣೆಗೆ: ಕರ-ಹೃದಯಾದಿ ನ್ಯಾಸಗಳು, ಮಾನಸಿಕ ಪಂಚೋಪಚಾರ ಪೂಜೆ, ಆವಾಹನೆ ಮತ್ತು ನೈವೇದ್ಯಾದಿ ಮುದ್ರೆಗಳು. ಪೂಜಾ ವಿಭಾಗದಲ್ಲಿರುವ ಅಷ್ಟಾವಧಾನ ಸೇವಾ ಮಂತ್ರಗಳು, ಆಶೀರ್ವಾದ ಮತ್ತು ಶಾಂತಿ ಮಂತ್ರಗಳು, ಅನುಭವೀ ಭಕ್ತರು ಮತ್ತು ಸಾಧಕರಿಂದ ಮೆಚ್ಚುಗೆ ಪಡೆದಿವೆ. ಶ್ರೀ ಜಗದಂಬೆಯ ಆಶೀರ್ವಾದದಿಂದ ಈ ಪುಸ್ತಕವು ನಿಸ್ಸಂದೇಹವಾಗಿ ಎಲ್ಲಾ ದೇವಿಯ ಭಕ್ತರಿಗೆ, ಆರಂಭಿಕರಿಂದ ಅನುಭವಿಗಳಿಗೆ ಮತ್ತಷ್ಟು ಆಧ್ಯಾತ್ಮಿಕ ಪ್ರಗತಿಯನ್ನು ತರುತ್ತದೆ.

|| ಜೈ ಚಂಡಿ ||

GRD Iyers GuruCool, ಗುರೂಜಿ ಶ್ರೀ ರಮೇಶ್ ನಟರಾಜನ್ ಮತ್ತು ಗುರುಮಾ ಶ್ರೀಮತಿ ಶ್ರೀದೇವಿ ಗಾಯತ್ರಿಯವರಿಂದ ಸ್ಥಾಪಿತವಾಗಿದೆ. ಅವರು ಜನರಲ್ಲಿ ಜಾತಿ, ಲಿಂಗ, ವರ್ಣ ಇತ್ಯಾದಿಗಳ ಭೇದ ಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ದೃಷಿಕೋಣವನ್ನು ಹೊಂದಿರುತ್ತಾರೆ. ಗುರುಜಿ ಮತ್ತು ಗುರುಮಾರವರು ವೇದಗಳು, ದುರ್ಗಾ ಸಪ್ತಶತೀ (ದೇವಿ ಮಹಾತ್ಮ್ಯೆ), ಶ್ರೀ ವಿದ್ಯಾ ತಂತ್ರ ಇತ್ಯಾದಿಗಳನ್ನು ಕಲಿಯುವ ಆಸಕ್ತಿ ಹೊಂದಿರುವವರಿಗೆ ಉಚಿತ ಬೋಧನೆಯನ್ನು ಒದಗಿಸುತ್ತಾರೆ

Similar products

Sign up & save

Be updated on new books and offers. Sign up now!